ಕಂಡವರಿಗೆ ಎದುರಾಗಿ
ಎದುರವರ ಮನಕೆ ಮುಳುವಾಗಿ
ಮಾತೊಳಗೆ ಯುದ್ಧ ಸನ್ನಿಧಿಗೊಯ್ವ
ಎದುರಾಳಿಗಳೆದೆಯಲಿ
ಹರಿಗತ್ತಿಯಾಗಿ ತೊಯ್ದು
ಮಾತು ಖಡ್ಗವಾಗಿ
ನೋಟ ಕಟುವಾಗಿ
ದೇಹ ಬೃಹದ್ಭಾರವಾಗಿ
ಲೋಕದ ಪರಮಾರ್ಥ
ನಿನಗೇಕೆ ಸುಮ್ಮನಿರು
ಸುನೀಲನಾಗಿ
ಮಾತು ಮನದಿಂದತ್ತತ್ತ
ಸುಳಿದು ಸುರಗಂಗೆಯಾಗಲೂ
ಸರಿ
ಬರದೊಳಗ ಝರಿಯಾಗಲೂ
ಸರಿ
ಮುಟ್ಟಿ ಕುಡಿಯಲೊಪ್ಪದ
ಕಡಲುಪ್ಪಾಗಲೂ ಸರಿ
ಮನ ಬಗೆದಂತದು
ತಾನು ತಿಳಿದಂತದು
ನೀನ್ ಹುಟ್ಟಿ ಬೆಳೆದ ಕೇರಿ
ದಾರಿಗಳ ಗುಣವನುಸುರುವುದೀ ಮಾತು
ಬಿಡು ಪರಮಾರ್ಥ ಚಿಂತೆ
ಸುನೀಲನಾಗು ನೀ