- ಚಿಕ್ಕ ಮಗು ಮಾತು ಮಾತಿಗೆ ಕೇಳುವ ಈ 'ಏಕೆ' ಯಲ್ಲಿಯೇ ತತ್ವಜ್ಞಾನದ ಎಲ್ಲ ತಥ್ಯವೂ ಅಡಕವಾಗಿದೆ.
- ಒಂದೇ ಹಗ್ಗದಿಂದ ಇಬ್ಬರೂ ನೇಣುಬಿಗಿದುಕೊಳ್ಳುವದಕ್ಕೆ ಮದುವೆ ಎಂದು ಹೆಸರು.
- ಒಬ್ಬನಿಗೆ ಹದಿನಾಲ್ಕು ಮಕ್ಕಳಿದ್ದರೆ ಮೊತ್ತ ಮೊದಲನೆಯವನಿಗೆ ಕಟ್ಟ ಕಡೆಯವನು ದೂರದ ಸಂಬಂಧಿ.. ಹೌದೋ? ಅಲ್ಲವೋ ?
- ಮನೆ ನಿಂತಿರುವುದು ಮಡದಿಯ ಮೇಲೆ, ಅಕಸ್ಮಾತ್ ಅದು ಬಿದ್ದರೆ ಗಂಡನ ತಲೆಯ ಮೇಲೆ!!.
- ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
- ವಾರದಲ್ಲಿ ಮೂರು ದಿನಾವಾದರೂ ನಗುತ್ತಾ ಇರಿ. ಇವತ್ತು, ನೆನ್ನೆ ಹಾಗು ನಾಳೆ.
- ಆ ಭಗವಂತ ಮೋಸ ಮಾಡುವ ಹೆಂಗಸರನ್ನು ಸೃಷ್ಟಿಸಿಯೇ ಇಲ್ಲ. ಆದರೆ ಮೋಸ ಹೋಗುವ ಗಂಡಸರನ್ನು ಮಾತ್ರ ಸೃಷ್ಟಿಸಿದ್ದಾನೆ.
- ಬಾಳಿನಲ್ಲಿ ಏನಿಲ್ಲ? .. ಕೊಲ್ಲಲು ವಿಷವಿದೆ, ಬದುಕಿಸಲು ಔಷಧವೂ ಇದೆ. ಔಷಧದಲೂ ವಿಷವಿದೆ. ಇದುವೇ ಜೀವನ.
- ಗೆಳೆಯನನ್ನು ಉಪ್ಪಿನಂತೆ ಬಳಸಬೇಕೇ ವಿನಾ ಸಕ್ಕರೆಯಂತೆ ಸುರುವಿಕೊಳ್ಳಬಾರದು.
- ಜೀವನೋಪಾಯಕ್ಕಾಗಿ ಅಲ್ಲದೆ ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ 'ಹವ್ಯಾಸ'ಗಳು.
- ಕೆಲಸವಿಲ್ಲದೇ ಸುಮ್ಮನೆ ಕುಳಿತವನ ಭುಜದ ಮೇಲೆ ಶನಿಯು ಬಂದು ಕೂರುತ್ತಾನೆ.
- ಉತ್ತಮ ಸಾಹಿತಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಕಸದ ಬುಟ್ಟಿ.
- ಬದುಕಿದ್ದಾಗ ತಂದೆ ತಾಯಿಗೆ ನೀರು ಕೊಡದವನು, ಸತ್ತ ಮೇಲೆ ಧಾರಾಳವಾಗಿ ಬೆಂಕಿ ಇಡುತ್ತಾನೆ.
- ಎಮ್ಮೆ ತಿರುಗಾಡಿ ಮೇಯುತ್ತದೆ, MLA ಕುಳಿತಲ್ಲೇ ಮೇಯುತ್ತಾನೆ.
- ಮಾತುಗಳನ್ನು ಎಣಿಸಿ ನೋಡಬಾರದು, ತೂಕ ಮಾಡಿ ನೋಡಬೇಕು.
- ಡಾಕ್ಟರರ ಸುತ್ತಲೂ ರೋಗಿಗಳೇ ಇರುವಂತೆ, ಒಳ್ಳೆಯವರ ಸುತ್ತಲೂ ಕೆಟ್ಟವರೇ ಇರುತ್ತಾರೆ.
- ಬಾಳಿನ ವ್ಯಾಕರಣ - ಹೆಣ್ಣು : ಪದ್ಯ, ಗಂಡು : ಗದ್ಯ, ಮಕ್ಕಳು : ರಗಳೆ.
- ಸುಳ್ಳನ್ನಾಡುವ ನೂರಾರು ಗೆಳೆಯರಿರುತ್ತಾರೆ, ಸತ್ಯವನ್ನಾಡುವ ಸಾವಿರಾರು ಶತ್ರುಗಳಿರುತ್ತಾರೆ.
- ಹಸಿವು ಚೆನ್ನಾಗಿದ್ದರೆ ಊಟ ಚೆನ್ನಾಗಿಯೇ ಇರುತ್ತದೆ.
- ಸಾವಿನ ಬಗ್ಗೆ ಎಚ್ಚರಿಸಲು ವರ್ಷಕ್ಕೊಮ್ಮೆ ಕಾಲರಾಯನು ಗಂಟೆ ಬಾರಿಸುವ ದಿನವೇ ಜನ್ಮ ದಿನ.
- ಬಳಸಿದಂತೆಲ್ಲ ಬೆಳೆಯುವ ಅಕ್ಷಯ ಪಾತ್ರೆ ನಗು.
- ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣುವುದಿಲ್ಲ, ಗಂಡನ ಒಳ್ಳೆ ಗುಣ ಹೆಂಡತಿಗೆ ಕಾಣುವುದಿಲ್ಲ.
- ಮಾವನ ಮನೆ ಸೇರುವ ಗಂಡು, ಗಂಡನ ಮನೆಗೆ ಬಾರದ ಹೆಣ್ಣು ಇಬ್ಬರೂ ಭೂಮಿಗೆ ಭಾರ.
- ಹಲವಾರು ಹೆಚ್ಚು ಕಷ್ಟ ಪಟ್ಟು ಉಣ್ಣುತ್ತಾರೆ, ಕೆಲವರು ಹೆಚ್ಚು ಉಂಡು ಕಷ್ಟ ಪಡುತ್ತಾರೆ.
- ಸತ್ಯವನು ಅರಿತವನು ಸತ್ತಂತೆ ಇರಬೇಕು.
- ನಗು ದೇವ ಭಾಷೆ, ಅಳು ಪಿಶಾಚಿ ಭಾಷೆ.
- ಮಗುವಿಗೆ ಅಳು, ಹೆಣ್ಣಿಗೆ ನಗು, ಅವಿವೇಕಿಗೆ ಧೈರ್ಯ, ಅಪ್ರಾಮಾಣಿಕನಿಗೆ ರಾಜಕಾರಣ ಅತ್ಯುತ್ತಮ ಆಯುಧಗಳು.
- ಹೆಂಡವಿದು ಜಗವು, ಮಿತವಾಗಿ ಕುಡಿಯಿದನು.
-0-
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ