ನಿತ್ಯ ಧರ್ಮ

  • ಪ್ರಾತಃ ಕಾಲದಲ್ಲಿ ಎಚ್ಚರ.
  • ಕಟ್ಟು ನಿಟ್ಟಾದ ನಿದ್ರಾ ಸಮಯ.
  • ದೇಹಾರೋಗ್ಯಕ್ಕಾಗಿ ಅವಶ್ಯಕ ವ್ಯಾಯಾಮ.
  • ದೇಹಕ್ಕೆ ಅವಶ್ಯವಿದ್ದಷ್ಟೇ ಆಹಾರ, ರುಚಿಗೆ ಮನಸೋತು ಅತೀ ಆಹಾರ ಸೇವನೆ ಸಲ್ಲದ ನಡವಳಿಕೆ.
  • ಪೌಷ್ಟಿಕಾಂಶ ಆಹಾರದ ಬಗ್ಗೆ ಕಾಳಜಿ.
  • ಯೋಗಾಸನಗಳ ಮೂಲಕ ಜ್ಞಾನ, ಮನಃ ಶಕ್ತಿಗಳ ಬೆಳವಣಿಗೆಗೆ ಒತ್ತು.
  • ಸರ್ವ ಕಾಲದಲ್ಲೂ ಸಮಾಧಾನ ಚಿತ್ತ.
  • ಅಧ್ಯಯನ ಮನೋಭಾವ ವೃದ್ಧಿ.
  • ಮನೋನಿಗ್ರಹಕ್ಕೆ ಇನ್ನಿಲ್ಲದ ಒತ್ತು.
  • ಬುದ್ಧಿ ಮತ್ತು ಮನಸ್ಸುಗಳನ್ನು ಬೇರ್ಪಡಿಸಿ ಮನಸ್ಸು ಬುದ್ಧಿಗೆ ಅಡಿಯಾಳಾಗುವಂತೆ ಉಪಾಯ.
  • ಬುದ್ಧಿಯನ್ನೇ ಸದಾ ಗೆಲ್ಲಿಸಬಲ್ಲ ಛಾತಿ.
  • ಅವಶ್ಯಕತೆ ಇದ್ದಷ್ಟೇ ಮಾತು.
  • ಸರ್ವಥಾ ಸೌಹಾರ್ದಯುತ ಮಾತು.
  • ಎಲ್ಲೆ ಮೀರದಂತೆ ನಾಲಿಗೆ ಮತ್ತು ಮನಸ್ಸಿಗೆ ಕಟ್ಟಾಜ್ಞೆ.
  • ನಗು ಮೊಗದ ಸಂವಹನ. 
  • ನಿಭಾಯಿಸುವ ಕಾರ್ಯಗಳ ಮೇಲೆ ಅತೀವ ನಿಗಾ.
  • ಮನಸ್ಸಿನ ದಾರಿ ಸುಲಭವಾಗಲು ದಿನಕ್ಕೆ ಕನಿಷ್ಠ ೧೫ ನಿಮಿಷವಾದರೂ ದಾರ್ಶನಿಕರ/ಸಾಧಕರ ಅನುಭಾವೋಕ್ತಿಗಳ ಅಧ್ಯಯನ.
  • ಮನೋಶಕ್ತಿಯನ್ನು ಕಸಿದು ಸೆಳೆಯುವ ಕ್ರಿಯೆಗಳಿಂದ ದೂರ.
-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...