ಈಚೀಚಿಗೆ ಕನ್ನಡ ಬರಹಗಾರರು ಹೆಚ್ಚೆಚ್ಚು ಬರುತ್ತಿದ್ದಾರೆ, ಬರೆಯುತ್ತಿದ್ದಾರೆ. ಕುವೆಂಪು, ಕಾರಂತರು, ಭೈರಪ್ಪನವರಂತಹವರು ನೆಚ್ಚಿನ ಲೇಖಕರಾದರೂ ನಮ್ಮ ಸಮಕಾಲೀನ ಸಮಸ್ಯೆಗಳಿಗೆ, ಸಂತೋಷಗಳಿಗೆ, ಹಾಸ್ಯಗಳಿಗೆ ಅವರ ಕೃತಿಗಳಲ್ಲಿ ಅಷ್ಟಾಗಿ ಆಸ್ಪದವಿಲ್ಲ. ಇದು ಅವರ ತಪ್ಪಲ್ಲ, ನಮ್ಮ ತಪ್ಪು ಅಲ್ಲ. ವ್ಯಕ್ತಿಯೊಬ್ಬ ಬರೆಯುವ ಕೃತಿ ಅವನ ಕಾಲ, ದೇಶದ ಮೇಲೆಯೂ ನಿಂತಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇ.
ಸಾಮಾನ್ಯವಾಗಿ ಸಾಹಿತ್ಯದಲ್ಲಿ ನಮ್ಮ ಜೀವನದ ಯಾವುದೋ ತೊಂದರೆಗೆ ಉತ್ತರ ಸಿಗಬಹುದು, ಯಾವುದೋ ಸುಪ್ತ ಪ್ರಜ್ಞೆ ಜಾಗೃತವಾಗಬಹುದು, ಯಾವುದೋ ಹೊಸ ವಿಚಾರ ಮನದಟ್ಟಾಗಬಹುದು ಹೀಗೆ ಇನ್ನೂ ಅನೇಕ 'ಆಗುವಿಕೆ'ಗಳು ನಡೆಯಬಹುದು, ಆದರೆ ಆ ಸಾಹಿತ್ಯವನ್ನು ಓದುವಾಗ ಅದರಲ್ಲಿ ನಮ್ಮನ್ನು ನಾವು ಎಷ್ಟರ ಮಟ್ಟಿಗೆ ಸಮೀಕರಿಸಿಕೊಂಡೆವು ಎನ್ನುವ ಆಧಾರದ ಮೇಲೂ ಅದರ ಆಳಕ್ಕಿಳಿದು ಅರ್ಥ ಮಾಡಿಕೊಳ್ಳುವ ವಿಧಾನ ಚಾಲ್ತಿಯಲ್ಲಿದೆ. ಎಲ್ಲರೂ ಇದೇ ವಿಧಾನದಿಂದ ಸಾಹಿತ್ಯ ಓದಬಲ್ಲರು ಎಂದು ಹೇಳಲಾರೆ, ಆದರೆ ಬಹು ಪಾಲಿನ ಜನರು ಇದೇ ಮಾರ್ಗದಲ್ಲಿ ಸಾಹಿತ್ಯವನ್ನು ನೆಚ್ಚಿಕೊಂಡಿರುವುದು ಕಾಲ ಕಾಲಕ್ಕೆ ಸಾಧಿತವಾಗಿದೆ.
ಹಳೆ ತಲೆಮಾರಿನ ಲೇಖಕರ ಸಾಹಿತ್ಯವನ್ನೋದುವಾಗ ಈ ಸಮೀಕರಣದ ತೊಂದರೆಯಿಂದ ನಾನು ಒದ್ದಾಡುತ್ತಿದೆ. ಸಾಹಿತ್ಯದಲ್ಲಿ ಇರಬಹುದಾದ ಕಲ್ಪನಾ ಪಾತ್ರಗಳ ಕುರಿತು 'ಇದು ನಿಜ ಸ್ಥಿತಿಯಲ್ಲಿ ನಡೆದರೆ ?' ಮುಂದೇನು ಅನ್ನುವ ಧೋರಣೆಯ ಮೇಲೂ ಆ ಪಾತ್ರಗಳನ್ನೂ ಕಂಡದ್ದುಂಟು. ಇವೆಲ್ಲವುಗಳಿಗೂ ಉತ್ತರವನ್ನು ನನ್ನ ಸಮಕಾಲೀನ ಲೇಖಕರು ಈಯಬಲ್ಲರು ಎಂಬ ಆಸೆಯೊಂದು ನನ್ನಲ್ಲಿ ಬಲವಾಯಿತು. ಸಮಕಾಲೀನ ಅದರಲ್ಲೂ ಯುವ ಲೇಖಕರ ಬರಹಗಳು ಈಗಿನ ಕಾಲಕ್ಕೆ ಒಪ್ಪುವ ವಿಚಾರಗಳನ್ನು ಹೆಕ್ಕಿ ತೆಗೆದುಕೊಂಡು ಅದರಮೇಲೆ ಸಾಹಿತ್ಯ ರಚನೆಯಲ್ಲಿ ತೊಡಗುವ ಯಾವುದಾದರೊಂದು ತಾಣವಿದ್ದರೆ ಅದು ನನಗೆ ವರವಾದಂತಾಯಿತು ಎಂದುಕೊಂಡು ಅನ್ವೇಷಣೆಯಲ್ಲಿ ತೊಡಗಿದ್ದ ನನಗೆ ದೊರಕಿದ್ದು 'ಪ್ರತಿಲಿಪಿ' ಎನ್ನುವ ತಾಣ.
ಅಲ್ಲಿ ಸಮಕಾಲೀನ ಸಾಧಕರ ಮಹಾ ಕೂಟವೇ ನೆರೆದಿದೆ, ಆಧುನಿಕ ವಿಚಾರಗಳು ಡಿಜಿಟಲ್ ಮಾಧ್ಯಮದ ಮುಖೇನ ಚರ್ಚೆಗೆ ಬರುತ್ತವೆ, ಜೀವನದ ವಿವಿಧ ರಂಗಗಳಲ್ಲಿರುವವರು ಅಲ್ಲಿ ನಡೆಯುವ ನಿತ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ, ಅಪಾರ ವಿಚಾರ ವಿನಿಮಯ ಅಲ್ಲಿ ನಡೆಯುತ್ತದೆ. ಅದೊಂದು ಮಹಾ ಸಾಗರ,ಅದರೊಳಗೆ ಇಳಿದು ನಮಗೆ ಬೇಕಾದ್ದಷ್ಟೇ ಹೆಕ್ಕಿಕೊಳ್ಳುವುದು ನಮ್ಮ ಧ್ಯೇಯವಾಗಬೇಕು ಅಷ್ಟೇ. ಇಂತಹ ತಾಣದಲ್ಲಿ ಇಂದು ನಾನೂ ಒಂದು ಕಿರುಗಾದಂಬರಿಯನ್ನು ಬರೆದಿದ್ದೇನೆ. ಇದು ಆ ತಾಣದಲ್ಲಿ ನನ್ನ ಚೊಚ್ಚಲ ಬರಹ. ಈ ಕೆಳಗಿನ ಕೊಂಡಿಯ ಸಹಾಯದಿಂದ ಅದನ್ನು ನೀವೂ ಓದಿ.
https://kannada.pratilipi.com/series/wcl6dynn7x8m