ಗಂಧರ್ವೆಯಿವೆಯಲ್ಲ,
ಸೋಜಿಗವೇನಲ್ಲ
ಕೃತಿ ಸಂಸ್ಕೃತಿ ತಾನ್
ತನ್ನ ದಾರಿಯೊಳ್ ಇವಳಂ
ಬಿಡದೆ
ತಾನೇ ಕೃತಿಯೊಡತಿಯಾಗಿ
ಸಂಸ್ಕೃತಿಯಾಗಿ
ಧರ್ಮದ ಸಾಕಾರ ಮೂರುತಿಯಾಗಿ
ಧರ್ಮವದು ತಾನೇ ಪೆಣ್ ರೂಪ ತಳೆದು
ಆವಿರ್ಭವಿಸಿಹುದು ನೋಡಿಲ್ಲಿ
ಏನೀ ಮಾಯೆ
ಪೆಣ್ ಮಾಯೆ
ಕೃತಿ ಮಾಯೆ
ಸಂಸ್ಕೃತಿ ಮಾಯೆ
ಧರ್ಮ ಮಾಯೆ
ಮಾಯೆ ತಾನ್ ಜಾಲವಾಗಿ
ಇವಳಂ ಬೀಸದೆ
ಬಿಟ್ಟಿದುದೆಲ್ಲಿ
ಸಂಸ್ಕೃತಿ ತಾನ್ ಕೃತಿಯಾಗಿ
ಬದುಕಲು
ಇಳೆಯೊಳಗವತರಿಸಿಕೊಂಬಂತೆ
ಅಶ್ವಿನಿ ದೇವತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ