ಕೊನೆಯ ದಿನ ಎಂದೋ ನಾ ಕಾಣೆ
ಅದೀಗಲೇ ಬಂದರು ನಾ ಮರೆಯೆ
ತಿಳಿಸುವುದ ಗೌರವನದಕೆ
ಇಷ್ಟು ದಿನ ಸಾಕಿ ಸಲುಹಿದ ಗುಡಿಗೆ
ಸತ್ಯಕ್ಕೆ ಗುರುವಾಗಿ, ಅನ್ನಕ್ಕೆ ಧಣಿಯಾಗಿ,
ನಮ್ಮ ಕಣ್ಣೊಳ್ ಧರಣಿಯಾಗಿ ಬಾಳಿದ ಬಾಳ್ಮೆಗೆ
ಕೊನೆಯ ದಿನವಿದು, ಉಳಿಯುವುದೆಂತು ,
ಬೆಳೆಯುವುದೆಂತು, ಆಗುವುದೆಂತು ಎಂಬ
ಧಾವಂತಗಳೆಲ್ಲ ನಿಶ್ಯೇಷವಾಗಿ ಹೋಗಲೇಬೇಕೆಂಬ
ಆಣತಿಯಿಲ್ಲಿ ಸಾಕಾರವಾಗುತಿದೆ.
ಮುಂದೇನಿದೆಯೋ ಕಾಣಲಿದು ಸಕಾಲ
ಕೊನೆಯಲ್ಲೂ ಕಲಿಯಬೇಕೆಂಬ ಹಂಬಲ
ಇದಲ್ಲವೇ ಬದುಕು ಕಲಿಸಿದ ಬಲ,
ಸತ್ಯವಿದು, ಅನುಭವಕ್ಕೊಂದು ಸತ್ಯ ದರ್ಶನ.
ಅದೀಗಲೇ ಬಂದರು ನಾ ಮರೆಯೆ
ತಿಳಿಸುವುದ ಗೌರವನದಕೆ
ಇಷ್ಟು ದಿನ ಸಾಕಿ ಸಲುಹಿದ ಗುಡಿಗೆ
ಸತ್ಯಕ್ಕೆ ಗುರುವಾಗಿ, ಅನ್ನಕ್ಕೆ ಧಣಿಯಾಗಿ,
ನಮ್ಮ ಕಣ್ಣೊಳ್ ಧರಣಿಯಾಗಿ ಬಾಳಿದ ಬಾಳ್ಮೆಗೆ
ಕೊನೆಯ ದಿನವಿದು, ಉಳಿಯುವುದೆಂತು ,
ಬೆಳೆಯುವುದೆಂತು, ಆಗುವುದೆಂತು ಎಂಬ
ಧಾವಂತಗಳೆಲ್ಲ ನಿಶ್ಯೇಷವಾಗಿ ಹೋಗಲೇಬೇಕೆಂಬ
ಆಣತಿಯಿಲ್ಲಿ ಸಾಕಾರವಾಗುತಿದೆ.
ಮುಂದೇನಿದೆಯೋ ಕಾಣಲಿದು ಸಕಾಲ
ಕೊನೆಯಲ್ಲೂ ಕಲಿಯಬೇಕೆಂಬ ಹಂಬಲ
ಇದಲ್ಲವೇ ಬದುಕು ಕಲಿಸಿದ ಬಲ,
ಸತ್ಯವಿದು, ಅನುಭವಕ್ಕೊಂದು ಸತ್ಯ ದರ್ಶನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ