ಲಿಂಗಾರತಿ - Lingarathi

ವಿದ್ವಾನ್ ಶ್ರೀ ಚಂದ್ರಶೇಖರ  ಶಾಸ್ತ್ರಿ ವಿರಚಿತ ಶಿವಪೂಜಾ ಪಂಚಾರತಿ.

ಜಯ ಸಚ್ಚಿದಾನಂದ
ನಿತ್ಯ ಪೂರ್ಣನಿಗೆ
ನಿತ್ಯ ಪೂರ್ಣನಿಗೆ
ಜಯವೆಂದು ಬೆಳಗುವೇ
ಜಯವೆಂದು ಬೆಳಗುವೇ
ಸಕಲಾ ದೇವನಿಗೆ
ಜಯದೇವ ಜಯದೇವ ||

ಬಿಂದು ಕಲೆ ನಾದದೀ
ಜನಿಯಿಲ್ಲದಂದು
ಜನಿಯಿಲ್ಲದಂದು
ಇಂದೂಧರ ಮುಖಲೀಲೆ
ಇಂದೂಧರ ಮುಖಲೀಲೆ
ಇಲ್ಲದಂದಂದು
ಒಂದೇ ಪರವಸ್ತು
ತಾನಾಗಿರುತಿಹುದಿಂದು
ತಾನಾಗಿರುತಿಹುದಿಂದು
ಚೆಂದಾದಿಂದೆತ್ತುವೇ
ಚೆಂದಾದಿಂದೆತ್ತುವೇ
ಒಂದಾರತಿಯನು ತಂದು
ನಾ ಬೆಳಗುವೆನಿಂದು
ಜಯದೇವ ಜಯದೇವ ||

ಗುರುಶಿಷ್ಯ, ಶಿವ ಶಕ್ತಿ
ಶಿವಜೀವರೆಂದು,
ಶಿವಜೀವರೆಂದು
ವರಪೂಜ್ಯ ಪೂಜ್ಯಕ
ವರಪೂಜ್ಯ ಪೂಜ್ಯಕ
ದಟಿಪೃಥ್ಯರೆಂದು
ಚರಲಿಂಗ ಮುಖವೂ
ಅಯ್ತಿರದೆ ಮತ್ತೊಂದು
ಅಯ್ತಿರದೆ ಮತ್ತೊಂದು
ಎರಡಾರತಿಯನು ತಂದು
ಎರಡಾರತಿಯನು ತಂದು
ಬೆಳಗುವೆನಿಂದು
ಜಯದೇವ ಜಯದೇವ ||

ಮೂರ್ಲಿಂಗ, ಮೂರಂಗ
ಮೂರ್ ದೇವರೆಂದು
ಮೂರ್ ದೇವರೆಂದು
ಮೂರ್ ಲೋಕ ಮೂರ್ ತತ್ವ
ಮೂರ್ ಲೋಕ ಮೂರ್ ತತ್ವ
ಗುಣಮಹಾತ್ಮರೆಂದು
ಈಲೆಯಿಂಭೂವರಣಕ್ಕೊಳಗಾಯಿತೆಂದು
ಒಳಗಾಯಿತೆಂದು
ಮೂರಾರತಿಯನು ತಂದು
ಮೂರಾರತಿಯನು ತಂದು
ಬೆಳಗುವೆನಿಂದು
ಜಯದೇವ ಜಯದೇವ ||

ನಾಲ್ಕು ತನು ಲಿಂಗಾ
ಕಳಚಿತ್ತಿಂದು ನಾದ
ಕಳಚಿತ್ತಿಂದು ನಾದ
ನಾಲ್ಕು ಗಟ್ಟಿತವಾಗಿ
ನಾಲ್ಕು ಗಟ್ಟಿತವಾಗಿ
ಘನಲಿಂಗವಾದ
ನಾಲ್ಕಾದಿಂ ಜಗದಾದಿ
ಘನ ಕೃತ್ಯವಾಯ್ತೆಂದು
ಘನ ಕೃತ್ಯವಾಯ್ತೆಂದು
ನಾಲ್ಕಾರತಿಯನು ತಂದು
ನಾಲ್ಕಾರತಿಯನು ತಂದು
ಬೆಳಗುವೆನಿಂದು
ಜಯದೇವ ಜಯದೇವ ||

ಪಂಚಾ ಮುಖವನು ತೊಳೆದ
ಮಾತೃ ಭೂತಗಳು
ಮಾತೃ ಭೂತಗಳು
ಪಂಚೀಕರಿಸಿ ಬ್ರಹ್ಮ
ಪಂಚೀಕರಿಸಿ ಬ್ರಹ್ಮ
ಅಂಡಾರಚನೆಗಳು
ಪಂಚಾಂಗ ಲಿಂಗ
ಶ್ರೀ ವಿರೂಪಾಕ್ಷಗೆಂದು
ಶ್ರೀ ವಿರೂಪಾಕ್ಷಗೆಂದು
ಪಂಚಾರತಿಯನು ತಂದು
ಪಂಚಾರತಿಯನು ತಂದು
ಬೆಳಗುವೆನಿಂದು
ಜಯದೇವ ಜಯದೇವ ||

ಜಯ ಸಚ್ಚಿದಾನಂದ
ನಿತ್ಯ ಪೂರ್ಣನಿಗೆ, ನಿತ್ಯ ಪೂರ್ಣನಿಗೆ.
ಜಯವೆಂದು ಬೆಳಗುವೇ, ಜಯವೆಂದು ಬೆಳಗುವೇ.
ಸಕಲಾ ದೇವನಿಗೆ
ಜಯದೇವ ಜಯದೇವ ||

***

Jaya sacchidananda 
nitya poornanige
nitya poornanige
jayavendu belaguve
jayavendu belaguve
sakala devanige
jayadeva jayadeva ||

Bindu kale naadadi
janiyilladandu
janiyilladandu
indudhara mukhaleele
indudhara mukhaleele
illadandandu
onde paravastu
taanaagirutihudindu
taanaagirutihudindu 
chendaadindettuve
chendaadindettuve
ondaaratiyanu tandu 
ondaaratiyanu tandu 
naa belaguvenindu
jayadeva jayadeva ||

Guru shishya, shiva shakthi
shiva jeevarendu
shiva jeevarendu
varapoojya poojyaka
varapoojya poojyaka
dati prithyarendu
charalinga mukhavu
aaytirade mattondu
aaytirade mattondu
eradaarathiyanu thandu
eradaarathiyanu thandu
belaguvenindu
jayadeva jayadeva ||

Moor linga, moor anga
moor devarendu
moor devarendu
moor loka moor tatva
moor loka moor tatva
guna mahaatmarendu
eeleyim bhoovaranakkolagaayitendu
olagaayitendu
mooraarathiyanu thandu
mooraarathiyanu thandu
belaguvenindu
jayadeva jayadeva ||

Naalku tanu lingaa
kalachitthindu naada
kalachitthindu naada
naalku gattitavaagi
naalku gattitavaagi
ghanalingavaada
naalkaadim jagadaadi
ghana krutyavaaytendu
ghana krutyavaaytendu
naalkaarathiyanu thandu
naalkaarathiyanu thandu
belaguvenindu
jayadeva jayadeva ||

Panchaa mukhavanu toleda
maatru bhootagalu
maatru bhootagalu
pancheekarisi bramha
pancheekarisi brmaha
andaarachanegalu
panchaanga linga
shree virupaakshagendu
shree virupaakshagendu
panchaarathiyanu thandu
panchaarathiyanu thandu
belaguvenindu
jayadeva jayadeva ||

Jaya sacchidananda
nitya poornanige
nitya poornanige
jayavendu belaguve
jayavendu belaguve
sakala devanige
jayadeva jayadeva ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...